Gold-Silver Rate: ಚಿನ್ನ ಬೆಲೆಯಲ್ಲಿ ₹ 8700 ಅಗ್ಗ, ಬೆಳ್ಳಿ ಬೆಲೆಯಲ್ಲಿ ₹ 1000 ಏರಿಕೆ!
ಎಂಸಿಎಕ್ಸ್ ನಲ್ಲಿ ಇಂದು ಚಿನ್ನ ಬೆಲೆ 47500 ರೂ.
ನವದೆಹಲಿ: ಚಿನ್ನ ಮತ್ತು ಬೆಳ್ಳಿ ಮತ್ತೆ ಬೆಲೆ ಏರಿಕೆಯತ್ತ ಮುಖ ಮಾಡಿವೆ. ಎಂಸಿಎಕ್ಸ್(MCX)ನಲ್ಲಿ ಇಂದು ಚಿನ್ನ ಬೆಲೆ 47500 ರೂ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 68,400 ರೂ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಕೂಡ ದುಬಾರಿಯಾಗಿದೆ.
MCX ಗೋಲ್ಡ್: ಚಿನ್ನ(Gold Rate)ವು 10 ಗ್ರಾಂಗೆ 155 ರೂ. ಸಾಮರ್ಥ್ಯವನ್ನು ತೋರಿಸುತ್ತಿದೆ ಮತ್ತು ಅದು 47500 ರೂ. ದಾಟಿದೆ. ಕಳೆದ ವಾರ ಚಿನ್ನವು 934 ರೂ. ಏರಿಕೆ ಆಗಿತ್ತು . ಎರಡು ವಾರಗಳಲ್ಲಿ ಚಿನ್ನವು ಇಂದು 2900 ರೂ.ಗೆ ದುಬಾರಿಯಾಗಿದೆ.
ಇದನ್ನೂ ಓದಿ: SBI Alert :ತಪ್ಪಿಯೂ ಈ ತಪ್ಪು ಮಾಡಬೇಡಿ, ಅಕೌಂಟ್ Zero Balance ಆಗಿಬಿಡುತ್ತದೆ
ಕಳೆದ ವಾರ (ಏಪ್ರಿಲ್ 12-16) ಚಿನ್ನ ಬೆಲೆ
ಸೋಮವಾರ 46419/10 ಗ್ರಾಂ
ಮಂಗಳವಾರ 46975/10 ಗ್ರಾಂ
ಬುಧವಾರ 46608/10 ಗ್ರಾಂ
ಗುರುವಾರ 47175/10 ಗ್ರಾಂ
ಶುಕ್ರವಾರ 47353/10 ಗ್ರಾಂ
ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!
ಚಿನ್ನ ಬೆಲೆಯಲ್ಲಿ ಸುಮಾರು 8700 ರೂ. ಇಳಿಕೆ:
ಕಳೆದ ವರ್ಷ, ಕರೋನಾ ಬಿಕ್ಕಟ್ಟಿನಿಂದಾಗಿ, ಜನರು ಚಿನ್ನದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದರು, ಆಗಸ್ಟ್ 2020 ರಲ್ಲಿ, MCX(Multi Commodity Exchange) ನಲ್ಲಿ 10 ಗ್ರಾಂ ಚಿನ್ನದ ಬೆಲೆ 56191 ರೂ.ಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಕಳೆದ ವರ್ಷ, ಚಿನ್ನವು 43% ನಷ್ಟು ಆದಾಯವನ್ನು ನೀಡಿತು. ಅತ್ಯುನ್ನತ ಮಟ್ಟಕ್ಕೆ ಹೋಲಿಸಿದರೆ, ಚಿನ್ನವನ್ನು 25% ವರೆಗೆ ಇಳಿಕೆ ಮಾಡಲಾಗಿದೆ. ಚಿನ್ನವು MCX ಮಟ್ಟದಲ್ಲಿ 10 ಗ್ರಾಂಗೆ 47500 ರೂ. ವಹಿವಾಟು ನಡೆಸುತ್ತಿದೆ, ಅಂದರೆ ಇದು ಇನ್ನೂ ಸುಮಾರು 8700 ರೂ.ಗಳಿಂದ ಅಗ್ಗವಾಗುತ್ತಿದೆ.
ಇದನ್ನೂ ಓದಿ: Alert! ಇಂದು ರಾತ್ರಿ 12 ಗಂಟೆಯ ಬಳಿಕ ಬ್ಯಾಂಕ್ ಗಳ ಈ ಸೇವೆ ಸ್ಥಗಿತಗೊಳ್ಳಲಿದೆ: RBI
MCX ನಲ್ಲಿ ಬೆಳ್ಳಿ ಬೆಲೆ: ಬೆಳ್ಳಿ ಸಹ ಶುಕ್ರವಾರ ಏರಿಳಿತಗಳೊಂದಿಗೆ ವಹಿವಾಟು ನಡೆಸಿತು. ಈ ಏರಿಳಿತದ ನಂತರ, ಬೆಳ್ಳಿಯಾ ಬೆಲೆ ಸ್ಥಿರವಾಗಿದೆ. ಬೆಳ್ಳಿ(Siliver Rate) 68600 ರೂ. ಕ್ಕಿಂತ ಹೆಚ್ಚಾಗಿದೆ. ಆದರೆ ಇಂದು ಇದು ಪ್ರತಿ ಕೆಜಿಗೆ 300 ರೂ.ಗಳಷ್ಟು ಇಳಿಕೆಯಾಗುತ್ತಿದೆ, ಇಂದಿನ ದರ 68400 ರ ಇದ್ದು. ಕಳೆದ ವಾರ ಬೆಳ್ಳಿ ಕೆಜಿಗೆ 2500 ರೂ. ಎರಡು ವಾರಗಳಲ್ಲಿ ಪ್ರತಿ ಕೆಜಿಗೆ ಬೆಳ್ಳಿಯ ದರ 3800 ರೂ. ಏರಿಕೆ ಆಗಿದೆ.
ಇದನ್ನೂ ಓದಿ: Oil Company ಗ್ರಾಹಕರಿಗೆ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.